Saturday, February 19, 2011

ಪೂಲನ್ ದೇವಿ.


ಹೆಸರಲ್ಲಿ ಹೂ ರಾಶಿಗೆಲ್ಲ ರಾಣಿಯಾಗಿದ್ದೆ
ಕಾಮುಕರ ಕ್ರೂರ ದ್ರಷ್ಟಿಗೆ ಮಕರಂದವಾದೆ
ಬಡತನ ಶಾಪ ಎಂಬುದಕ್ಕೆ ಉದಾಹರಣೆಯಾದೆ
ಇವೆಲ್ಲವನು ಮೆಟ್ಟಿ ನಿಂತು ಜಯಶಾಲಿಯಾದೆ

ಬಡತನದಿ ಬಳಲುತ್ತಿದ್ದ ಮನೆಗೆ ಮಗುವಾದೆ
ಒಪ್ಪತ್ತು ಊಟಕ್ಕಿಲ್ಲದೆ ಹಸಿವೆಯಿಂದ ಮರುಗಿದೆ
ಹೊರೆಹೊತ್ತು ದುಡಿಯಲು ನೀ ನಿರ್ದರಿಸಿದೆ
ಮನೆಗೆ ಹಿರಿಯಳಾಗಿ ಜಾವಾಬ್ದಾರಳಾದೆ

ಮದುವೆಯ ಅರ್ಥವರಿಯದೆ ವದುವಾಗಿ ಹೋದೆ
ಕಾಮುಕ ವರನಿಗೆ ಕೈ ಗೊಂಬೆಯಾದೆ
ಮನಬಿಚ್ಚಿ ಆಟವಾಡುವ ಕನಸನ್ನು ಕಂಡೆ
ಕನಸೆಲ್ಲ ಚೂರಾಗಿ ಒಳಗೊಳಗೆ ನೊಂದೆ

ಅರಿಯದ ಜನರಿಗೆ ನೀ ಹೊರೆಯಾದೆ
ತನ್ನವರ ಹಕ್ಕಿಗಾಗಿ ಮಸಿಬಳಿದು ಕೊಂಡೆ
ರಕ್ಶಣೆಗೆ ಕೈ ಚಾಚಿ ಕೈ ಸುಟ್ಟುಕೊಂಡೆ
ನೋಡುವವರ ದ್ರಷ್ಟಿಯಲಿ ಮತಿಹೀನಳಾದೆ

ಊರ ಜನರ ಬಾಯಲ್ಲಿ ಹೀಯಾಳಿಕೆಯಾದೆ
ಅಪಮಾನವ ನೆನೆದು ನೀ ಕ್ರೂರಿಯಾದೆ
ಊರಬಿಟ್ಟು ಕಾಡು ಸೇರಿ ನೀ ರಾಣಿಯಾದೆ
ಜಗದಗಲ ಹೆಸರನ್ನು ವಿಸ್ತರಿಸಿಕೊಂಡೆ

ಮೇಲ್ವರ್ಗದ ಜನರಿಗೆ ಭಯ ಭೀತಿಯಾದೆ
ಬಡಜನರ ಕಷ್ಟದಲಿ ನೀ ಭಾಗಿಯಾದೆ
ಆರಕ್ಶರ ಕಾವಲಿಗೆ ನೀ ಪ್ರೆಶ್ನೆಯಾದೆ
ಕೊನೆಗೊಂದು ದಿನ ಶರಣಾಗತಳಾದೆ

ಜನರ ಪೀತಿಯಿಂದ ನೀ ಗೆದ್ದು ಬಂದೆ
ರಾಷ್ಟ್ರದ ಸೇವೆಗೆ ಮುಡಿಪಾಗಿ ಬಿಟ್ಟೆ
ರಾಜಕೀಯ ತುಮುಲಕ್ಕೆ ಬಿಲಿಪಶುವಾದೆ
ನಂಬಿದವರ ಗುಂಡಿಗೆ ನೀ ಬಲಿಯಾದೆ.

No comments:

Post a Comment