Thursday, June 27, 2013

ಚೀಪ್ ಲಿಕ್ಕರು...


ಬೇಳೆ ಕಾಳು ಬೆಯ್ಸಾಕ್ಕೆ
ಕೊಡಿಸ್ರಿ ನಮ್ಗೆ ಕುಕ್ಕಾರು
ಬ್ಯಾಡ್ರಿ ನಮ್ಗೆ ಚೀಪು ಲಿಕ್ಕಾರು

ಮಾನ ಮರ್ವಾದೆ ಮುಚ್ಚಾಕೆ
ಕೊಡಿಸ್ರಿ ನಮ್ಗೆ ನಿಕ್ಕಾರು
ಬ್ಯಾಡ್ರಿ ನಮ್ಗೆ ಚೀಪು ಲಿಕ್ಕಾರು

ಅಕ್ಕಿ-ರಾಗಿ ಬೆಳೊಸ್ಕೊಂಡು
ಅಗ್ಬೇಕು ನಾವು ಪಾರ್ಮಾರು
ಬ್ಯಾಡ್ರಿ ನಮ್ಗೆ ಚೀಪು ಲಿಕ್ಕಾರು

ಶಾಲೆ-ಕಾಲೇಜು ಓದ್ಕೊಂಡು
ಅಗ್ಬೇಕು ನಾವು ಡಾಕ್ಟಾರು
ಬ್ಯಾಡ್ರಿ ನಮ್ಗೆ ಚೀಪು ಲಿಕ್ಕಾರು

ದೇಶ ಕಾಯೊ ಮಕ್ಳಾಗೀ
ಅಗ್ಬೇಕು ನಾವು ಸೊಲ್ಜಾರು
ಬ್ಯಾಡ್ರಿ ನಮ್ಗೆ ಚೀಪು ಲಿಕ್ಕಾರು

No comments:

Post a Comment