ಏನನ್ನು ಚಿಂತಿಸದೆ ಮಲಗಿದ್ದರು ಜನರು
ಮರುದಿನ ಏಳುವಾಗ ಹಲವರಿಗಿಲ್ಲ ಉಸಿರು
ಬದುಕುಳಿದವರಿಗೆ ಕಾಣದಾಯಿತು ನಿಸರ್ಗದ ಹಸಿರು
ಎಲ್ಲೆಲ್ಲೂ ನೋಡಿದರೂ ರಕ್ತ ತುಂಬಿದ ಕೆಸರು
ಕಂಪಿಸಿತು ಭೂಮಿ ಏನನ್ನೂ ಉಳಿಸದೆ
ಪ್ರಾಣವನು ಹಿಂಡಿತು ಜಾತಿ-ಭೇದವಿಲ್ಲದೆ
ತತ್ತರಿಸಿತು ಮನೆ ಮಠ ಕ್ಶಣ ಮಾತ್ರದಲ್ಲಿ
ಹರಿಯಿತು ರಕ್ತದೋಕುಳಿ ರಸವೇಗದಲ್ಲಿ
ಹೆತ್ತ ಕರುಳಿಗೆ ಹೊತ್ತು ಸಲಹುವ ಭಾಗ್ಯವಿಲ್ಲವಾಯಿತು
ಹೊತ್ತು ಸಲಹಿದ ಮಕ್ಕಳಿಗೆ ದಿಕ್ಕೆ ಇಲ್ಲದಾಯಿತು
ನಲಿವ ಕಂದಮ್ಮಗಳಿಗೆ ಹೆತ್ತ ಮಡಿಲು ಇಲ್ಲದಾಯಿತು
ಎಲ್ಲವನು ಕಳಕೊಂಡವರಿಗೆ ದಿಕ್ಕೇ ತೋಚದಾಯಿತು
ದೇಶಕ್ಕೆ ಮಹಾನ್ ನೇತನನ್ನು ಕೊಟ್ಟ ನಾಡಾಗಿತ್ತು
ಆರ್ಥಿಕ ಪ್ರಗತಿಯ ಸಾದಿಸಿದ ಕೇಂದ್ರ ಬಿಂದುವಾಗಿತ್ತು
ವಿವಿದತೆಯಲ್ಲಿ ಏಕತೆಯನ್ನು ಕಂಡ ಬೀಡಾಗಿತ್ತು
ರಾಷ್ಟ್ರದ ಗಡಿಯನ್ನು ಕಾಯುವ ಗೋಡೆಯಾಗಿತ್ತು
ಪ್ರಕ್ರತಿಯ ಈ ನಿಯಮಕ್ಕೆ ತಲೆಬಾಗಬೇಕಯ್ಯಾ
ಹೀಗೆಂದು ಕೈ ಕಟ್ಟಿ ಕುಳಿತರೆ ಏನು ಸಾಧಿಸುವೆವಯ್ಯಾ
ಭೂಕಂಪದಿ ಅನಾಥರಾದವರಿಗೆ ನಾವೇ ದಿಕ್ಕಯ್ಯಾ
ಭುಜ್‍ಗೆ ಭುಜಕೊಡದಿದ್ದರೆ ಸವಿನುಡಿಗೆ ಅರ್ಥವೇನಯ್ಯ
No comments:
Post a Comment