ನಾನು-ನೀನು ಎಂಬ ಖಡು ಜಂಬವೇಕಯ್ಯಾ
ನಮ್ಮಲ್ಲರಿಯುವುದು ಒಂದೇ ರಕ್ತವಯ್ಯಾ
ನನ್ನದು-ನಿನ್ನದು ಎಂಬ ಜಗಳವೇಕಯ್ಯಾ
ಇದೆಲ್ಲವೂ ಆ ಪರಮನ ವರದಾನವಯ್ಯಾ
ಪರರ ನಿಂದಿಸಿ ನಕ್ಕು ನಲಿಯುವ ಮ್ರಗನಾದರೆ
ನಿನ್ನ ಪಾಡೇನೆಂದು ಅರಿತಿರುವೆಯಾ ?
ಉಪಕಾರಿಯಾಗದೆ ನಯವಂಚಕ ಜೀವಿಯಾದರೆ
ನಿನಗೇನು ಕಾದಿದೆಂದು ಯೋಚಿಸಿರುವೆಯಾ ?
ಬಡತನದಿ ಬೇಯುತ್ತಿರುವ ಸಹೋದರನೆದುರು
ನಿನ್ನ ಆಸ್ತಿಗೆ ಮೌಲ್ಯವೇನಯ್ಯಾ ?
ಬಳಲಿ ಸೋತುಹೋದ ನೆರೆಯವನೆದುರು
ನಿನ್ನ ಸವಿ ನುಡಿಗಳಿಗೆ ಅರ್ಥವೇನಯ್ಯಾ ?
ಜನರನ್ನು ಓಲಿಸಿ ಕೈ ಮುಗಿದು ಗೆದ್ದರೆ
ನಿನ್ನ ಜವಾಬ್ದಾರಿಯೇನೆಂದು ಅರಿತಿರುವೆಯಾ ?
ದೇಶವಾಳುವ ನಾಯಕನೇ ಭಕ್ಶಕನಾದರೆ
ಜನರ ಶಾಪದ ಕಿಡಿಯನ್ನು ಊಹಿಸಿರುವೆಯಾ ?
ಜಾತಿ-ಮತದ ಹೆಸರಲ್ಲಿ ದೇಶ ಒಡೆದರೆ
ನಿನ್ನ ಮಂತ್ರ ಪಟಣಕ್ಕೆ ಫಲವೇನಯ್ಯಾ ?
ಮಂದಿರ-ಮಸೀದಿಯನ್ನು ಹೊಡೆದುರುಳಿಸಿದರೆ
ಪರಮನ ಕಾಣಲು ಹೋಗುವುದೆಲ್ಲಯ್ಯಾ ?
No comments:
Post a Comment