Friday, January 25, 2013

ಹೆಣ್ಣಿನ ಅಳಲು....



ತಂದೆ ತಾಯಿಯ ಆಸೆಯಲ್ಲಿ ನಿರಾಶಳಾಗಿ ಹುಟ್ಟಿದೆ
ಅದ್ಯಾಕೊ ಹುಟ್ಟಿನಿಂದಲೂ ನನ್ನ ಹಣೆಬರಹವೇ ಕೆಟ್ಟಿದೆ
ಬೆಳೆದು ಬಂದ ದಾರಿಯಲ್ಲಂತು ಕಲ್ಲು ಮುಳ್ಳುಗಳ ಮೆಟ್ಟಿದೆ
ಯಾರು ಬಲ್ಲರು, ನನ್ನ ಜೀವನದಿ ಮುಂದೇನು ಕಾದಿದೆ ?

ನನಗೂ ತಿಳಿಯದೆ ಒಂದು ದಿನ ಬೆಳೆದು ನಿಂತೆ
ನನ್ನ ಚಲನ ವಲನದ ಮೇಲೆ ಕಟ್ಟಲಾರಂಬಿಸಿದರು ಅಂತೆ ಕಂತೆ
ಸುತ್ತಲಿನ ಜನರನ್ನು ಪ್ರೀತಿಯಿಂದ ನೋಡಲಾರಂಬಿಸಿದೆ
ಪ್ರೀತಿಯ ಬೆಲೆಯರಿಯದ ಈ ಲೋಕದಲ್ಲಿ ಜಾರಿ ಬಿದ್ದೆ

ನನ್ನ ಮೆಚ್ಚಿ ಮನೆ ತುಂಬಿಸುವ ಪೋರನಿಗೆ ಹುಡುಕಾಡಿದೆ
ಮನೆಯವರ ಒತ್ತಾಯಕೆ ಮಣಿದು ಇನ್ನೊರ್ವನ ಕೈಗೊಂಬೆಯಾದೆ
ದುಡ್ಡು, ಆಸ್ತಿ, ವರದಕ್ಶಿಣೆಯ ಚೆಲ್ಲಾಟದಲ್ಲಿ ಸೋತುಹೋದೆ
ಕೊನೆಗೂ ಗುಲಾಮಳಾಗಿ ಹೆಣ್ಣಾಗಿ, ಹೆಂಡತಿಯಾಗಿ ಜೀವನ ಸವೆಸಿದೆ

ಯಾಕೆ ನನ್ನ ಹಣೆಯಲ್ಲಿ ದುಃಖದ ದಿನಗಳನ್ನು ಬರೆದಿದ್ದಾರೆ ?
ಹುಡುಗಿ ಅನ್ನೊ ಕಾರಣಕ್ಕೆ ನನ್ನ ಸ್ವತಂತ್ರ ಕಸಿದುಕೊಂಡಿದ್ದಾರೆ!
ಯಾಕೆ ನನ್ನ ಬದುಕಿನ ದಿನಗಳಿಗೆ ಲಕ್ಶ್ಮಣ ರೇಖೆ ಹಾಕಿದ್ದಾರೆ ?
ಗಂಡಿಸಿನ ಕೈಂ ಗೊಂಬೆಯಾಗಲು ಯಾಕೆ ನನ್ನನ್ನು ನಿರ್ಮಿಸಿದ್ದಾರೆ ?

No comments:

Post a Comment