ಆಡಬೇಡವೇ ಹುಡುಗಿ ನೀ ಆಟವಾಡಬೇಡ
ನೊಂದ ಹ್ರದಯವಿದು ತೊರೆದು ದೂರ ಹೋಗಬೇಡ
ಪ್ರೀತಿಯ ಸೆಲೆಗೆ ಸಿಕ್ಕ ರೋಗಿಯಾಗಿ ಮಾಡಬೇಡ
ನಿನ್ನ ಬಿಟ್ಟು ಬಾಳುವ ತುಮುಲಕ್ಕೆ ದೂಡಬೇಡ
ಹೂ ಹಾಗು ದುಂಬಿಯ ನಂಟು ನಮ್ಮದು
ಮಕರಂದ ಇಲ್ಲದಿರೆ ದುಂಬಿ ಬದುಕಿತೆ ?
ಮಾಮರ ಹಾಗು ಕೋಗಿಲೆಯ ಭಂದ ನಮ್ಮದು
ವಸಂತ ಕಾಲ ಬಾರದಿರೆ ಕೋಗಿಲೆ ಕೂಗಿತೆ ?
ಚಂದಿರ ಹಾಗೂ ಸಾಗರದ ಸ್ನೇಹ ನಮ್ಮದು
ಹುಣ್ಣಿಮೆಯು ಬಾರದಿರೆ ಅಲೆಗಳು ಆಡಿತೆ ?
ಅಂದ ಚೆಂದ ಲೆಕ್ಕಿಸದೆ ನಿನ್ನ ಪ್ರೀತಿ ಮಾಡಿದೆ
ಆ ಪ್ರೀತಿ ದಕ್ಕಲೆಂದು ದೇಗುಲಗಳ ಸುತ್ತಿದೆ
ನಿನ್ನ ನೆನೆದು ಹ್ರದಯದಲಿ ಪ್ರೀತಿಯ ಮೂರ್ತಿ ಕೆತ್ತಿದೆ
ನಿ ನನ್ನ ತೊರೆದು ಹ್ರದಯದ ಮೇಲೆ ಗೋರಿ ಕಟ್ಟಿದೆ.
ನಿಮ್ಮ ಕವಿತೆ ಬಹಳ ಸೊಗಸಾಗಿದೆ .....ನಿಮ್ಮನ್ನು ಕನ್ನಡ ಬ್ಲಾಗ್ ಎಂಬ ಸಾಹಿತ್ಯದ ವೇದಿಕೆಗೆ ಬರಲು ವಿನಂತಿಸುತ್ತಿದ್ದೇನೆ
ReplyDeletehttps://www.facebook.com/groups/kannadablog/