ಹುಟ್ಟು ಸಾವಿನ ನಡುವೆ ಮನುಷ್ಯನ ಬದುಕು ಜೀವನ
ಹುಟ್ಟಿದ ಮೇಲೆ ಸಾವೆ ಇಲ್ಲವೆಂಬ ಪ್ರತಿಪಾದನೆ ಮೊಂಡುತನ
ಬದುಕಿನ ಹಾದಿಯಲಿ ಬದುಕಲು ಕಲಿಯುವುದೇ ಜೀವನ
ಹೇಗೂ ಬದುಕಿ ಆಯಸ್ಸು ತೀರಿಸುವುದು ಅಲ್ಪತನ
ಇರುವ ಕಣ್ಣುಗಳಿಂದ ಸುಂದರತೆ ಸವಿಯುವುದು ಜೀವನ
ಕಂಡೂ ಕಾಣದೆ ಅಂಧಕಾರದಲ್ಲಿ ನಡೆಯುವುದು ನಿರ್ಲಕ್ಶತನ
ಇರುವ ಕೈಗಳಿಂದ ಕೊಡುಗೈ ಧಾನಿಯಾಗುವುದು ಜೀವನ
ಇದ್ದು ಇಲ್ಲದಂತೆ ಮತ್ತಷ್ಟು ಕಬಳಿಸುವುದು ಹೊಟ್ಟೆಬಾಕತನ
ಪೀತಿಸುವ ಹ್ರದಯವನು ಹಂಚಿ ಕೊಳ್ಳುವುದು ಜೀವನ
ಹ್ರದಯವ ಕಲ್ಲಾಗಿಸಿ ದ್ವೇಶದ ಬಾಳುವೆ ಹಗೆತನ
ಬುದ್ದಿವಂತೆಕೆಯನು ಪರರ ಒಳಿತಿಗೆ ಬೆಳಗಿಸುವುದು ಜೀವನ
ಪರರ ನಿಂದಿಸಿ ಅಜ್ನಾನಿ ಎಂದು ದೂರುವುದು ಮೂರ್ಖತನ
ಬದುಕಿನ ಕಷ್ಟಗಳನ್ನು ಅರೆದು ಕುಡಿಯುವುದು ಜೀವನ
ಕಷ್ಟಗಳು ಮುಂದಾದಾಗ ಸೋಲೊಪ್ಪಿ ಓಡುವುದು ಹೇಡಿತನ
ಇದ್ದದ್ದರಲ್ಲೆ ತ್ರಪ್ತಿಯಾಗಿ ನಿಶ್ಚಿಂತೆಯ ಬದುಕು ಜೀವನ
ಇನ್ನೂ ಬೇಕೆಂದು ನೆಮ್ಮದಿಯ ಕಳೆದುಕೊಳ್ಳುವುದು ಹುಚ್ಚುತನ
No comments:
Post a Comment